ಈಜಿಪ್ಟ್: 16 ಶಂಕಿತ ಉಗ್ರರ ಹತ್ಯೆ
ಕೈರೋ, ಫೆ. 20: ಈಜಿಪ್ಟ್‌ನ ಭದ್ರತಾ ಪಡೆಗಳು ಉತ್ತರ ಸಿನೈನಲ್ಲಿರುವ ಆರಿಶ್ ನಗರದಲ್ಲಿ ನಡೆಸಿದ ಎರಡು ಕಾರ್ಯಾಚರಣೆಗಳಲ್ಲಿ 16 ಶಂಕಿತ ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ಸರಕಾರಿ ಒಡೆತನದ ‘ಅಲ್-ಅಹ್ರಮ್’ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಅದೇ ವೇಳೆ, ಸೋಮವಾರ ತಡ ರಾತ್ರಿ ರಾಜಧಾನಿ ಕೈರೋದ ಪ್ರಸಿದ್ಧ ಪ್ರವಾಸಿ ಮಾರುಕಟ್ಟೆಯ ಸಮೀಪ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ ಮೂರಕ್ಕೆ ಏರಿದೆ. ಸ್ಫೋಟದಲ್ಲಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕೊನೆಯುಸಿರೆಳೆದಿದ್ದಾರೆ.
ಕೈರೋದ ಗಿಝಾ ಜಿಲ್ಲೆಯ ಮಸೀದಿಯೊಂದರ ಸಮೀಪ ಶುಕ್ರವಾರ ನಡೆದ ಬಾಂಬ್ ಸ್ಫೋಟದ ಆರೋಪಿಯಾಗಿದ್ದ ವ್ಯಕ್ತಿಯನು ಪೊಲೀಸರು ಬಂಧಿಸಲು ಹೋದಾಗ ಅವನು ತನ್ನನ್ನು ತಾನೇ ಸ್ಫೋಟಿಸಿಕೊಂಡನು. ಈ ಸ್ಫೋಟದಲ್ಲಿ ಸತ್ತ ಎಲ್ಲಾ ಮೂವರು ಪೊಲೀಸ್ ಅಧಿಕಾರಿಗಳಾಗಿದ್ದಾರೆ.
Next Story