ಎಂ. ಪಾಂಡುರಂಗ ಪೈ
ಬಂಟ್ವಾಳ, ಫೆ. 21: ಬಿ.ಸಿ.ರೋಡಿನ ಉದ್ಯಮಿ ಎಂ. ಪಾಂಡುರಂಗ ಪೈ (64) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹವ್ಯಾಸಿ ರಂಗಭೂಮಿ, ಚಲನಚಿತ್ರ ನಟ ಸುಬ್ರಹ್ಮಣ್ಯ ಪೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಹಲವು ದಶಕಗಳಿಂದ ದಿನಪತ್ರಿಕೆ ವಿತರಣೆ ನಡೆಸಿದ್ದ ಅವರು, ಸ್ವಂತ ಉದ್ಯಮಿಯಾಗಿ ಯಶಸ್ವಿಯಾಗಿದ್ದರು. ಹವ್ಯಾಸಿಯಾಗಿ ಸೈಕಲ್ ರೇಸ್ನಲ್ಲಿ ಪಾಲ್ಗೊಂಡು ಪದಕಗಳನ್ನೂ ಅವರು ಗಳಿಸಿದ್ದರು.
Next Story