ಶೌಕತ್ ಅಲಿ
ಮಂಗಳೂರು, ಫೆ. 25: ಮೂಲತಃ ಮುಲ್ಕಿ - ಕೊಳಚೆಕಂಬಳ ನಿವಾಸಿ, ದಿ. ಮುಹಮ್ಮದ್ ಮುಲ್ಕಿ ಅವರ ಪುತ್ರ ಶೌಕತ್ ಅಲಿ (52) ಕಂಕನಾಡಿಯ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು.
ಮೃತರು ಓಶಿಯನ್ ಕನ್ ಸ್ಟ್ರಕ್ಷನ್ ನ ಮುಲ್ಕಿ ಇನಾಯತ್ ಅಲಿ ಅವರ ಹಿರಿಯ ಸಹೋದರ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇಂದು ಸಂಜೆ ಮುಲ್ಕಿ ಕೇಂದ್ರ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story