ವಿಶ್ವದಲ್ಲೇ ಅಗ್ಗದ ಮೊಬೈಲ್ ಡಾಟಾ ಪ್ಯಾಕ್ ನೀಡುವ ದೇಶ ಯಾವುದು ಗೊತ್ತೆ?
ಲಂಡನ್, ಮಾ.6: ವಿಶ್ವದಲ್ಲೇ ಅತ್ಯಂತ ಅಗ್ಗದ ಮೊಬೈಲ್ ಡಾಟಾ ಪ್ಯಾಕ್ ನೀಡುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಮೆರಿಕ ಹಾಗೂ ಇಂಗ್ಲೆಂಡ್ ಡಾಟಾ ಪ್ಯಾಕ್ಗಳು ವಿಶ್ವದಲ್ಲೇ ದುಬಾರಿ ಎನ್ನುವ ಅಂಶ ಬ್ರಿಟನ್ ನಡೆಸಿದ ಸಂಶೋಧನೆಯೊಂದರಿಂದ ತಿಳಿದುಬಂದಿದೆ.
ಬೆಲೆ ಹೋಲಿಕೆ ವೆಬ್ಸೈಟ್ cable.co.uk ನಡೆಸಿದ ಸಂಶೋಧನೆಯ ಪ್ರಕಾರ ಒಂದು ಜಿಬಿಇ ಡಾಟಾದ ಬೆಲೆ ಭಾರತದಲ್ಲಿ 0.26 ಡಾಲರ್ ಆಗಿದ್ದರೆ, ಬ್ರಿಟನ್ನಲ್ಲಿ ಇಷ್ಟೇ ಡಾಟಾ ಬಳಸಲು 6.66 ಡಾಲರ್ ಖರ್ಚು ಮಾಡಬೇಕು. ಆದರೆ ಅಮೆರಿಕ ಜಗತ್ತಿನ ಅತ್ಯಂತ ದುಬಾರಿ ಡಾಟಾ ಬೆಲೆ ಹೊಂದಿದ್ದು, 1 ಜಿಬಿ ಡಾಟಾದ ಬೆಲೆ ಇಲ್ಲಿ 12.37 ಡಾಲರ್!
ಒಂದು ಜಿಬಿ ಡಾಟಾ ಪ್ಯಾಕ್ ಬೆಲೆ ಜಾಗತಿಕವಾಗಿ ಸರಾಸರಿ 8.53 ಡಾಲರ್ಗಳಾಗಿವೆ. ವಿಶ್ವದ ಎಲ್ಲ 230 ದೇಶಗಳಲ್ಲಿನ ಡಾಟಾ ಪ್ಯಾಕ್ ಬೆಲೆಯನ್ನು ಕಂpeನಿ ಹೋಲಿಸಿತ್ತು. "ಅತ್ಯಧಿಕ ತಾಂತ್ರಿಕ ಅರಿವು ಹೊಂದಿರುವ ಯುವಜನರನ್ನು ಹೊಂದಿದ ಭಾರತ, ಆಕರ್ಷಕ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಅತ್ಯಧಿಕ ಪ್ರಮಾಣದ ಬಳಕೆ ಹಾಗೂ ಕಂಪೆನಿಗಳ ನಡುವಿನ ಸ್ಪರ್ಧೆಯಿಂದಾಗಿ ಇಲ್ಲಿ ಡಾಟಾ ಅತ್ಯಂತ ಅಗ್ಗ" ಎಂದು ವೆಬ್ಸೈಟ್ ಹೇಳಿದೆ.
ಅಗ್ಗದ ಮೊಬೈಲ್ ಡಾಟಾ ಪ್ಯಾಕ್ ದರಪಟ್ಟಿಯಲ್ಲಿ ಭಾರತ (0.26 ಡಾಲರ್) ಅಗ್ರಸ್ಥಾನಿಯಾಗಿದ್ದರೆ, ಕಿರ್ಗಿಸ್ತಾನ (0.27 ಡಾಲರ್), ಖಜಕಿಸ್ತಾನ್ (0.49 ಡಾಲರ್), ಉಕ್ರೇನ್ (0.51 ಡಾಲರ್) ಮತ್ತು ರುವಾಂಡ (0.56 ಡಾಲರ್) ನಂತರದ ಸ್ಥಾನಗಳಲ್ಲಿವೆ.