ವಕ್ಫ್ ನಿಯಮಾವಳಿಯ ನಮೂನೆ ಪಡೆಯಲು ಸೂಚನೆ
ಮಂಗಳೂರು, ಮಾ.8: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೊಂದಣಿಗೊಂಡ ದ.ಕ. ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನವೂನೆ ನಂ-42ನ್ನು ದ.ಕ.ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆದುಕೊಂಡು, ವಕ್ಫ್ ಮಂಡಳಿಯಲ್ಲಿ ನೊಂದಣಿಗೊಂಡ ದೃಢಪತ್ರ, ನಿರ್ಣಯದ ಪ್ರತಿಯೊಂದಿಗೆ ನಮೂನೆ-42ನ್ನು ಭರ್ತಿ ಮಾಡಿ ಜಿಲ್ಲಾ ವಕ್ಫ್ ಕಚೇರಿಗೆ ಅಂಗೀಕಾರಕ್ಕಾಗಿ ಸಲ್ಲಿಸಬೇಕು.
ಮಾಹಿತಿಗಾಗಿ ಜಿಲ್ಲಾ ವಕ್ಫ್ ಕಚೇರಿಯ (ದೂ.ಸಂ:0824-2420078)ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ತಿಳಿಸಿದ್ದಾರೆ.
Next Story