ಮೊಬೈಲ್ ಅಂಗಡಿಯಲ್ಲಿ ಕಳವು
ಬೈಂದೂರು, ಮಾ.9: ಶಿರೂರು ಮಾರ್ಕೆಟ್ನಲ್ಲಿರುವ ಮೊಬೈಲ್ ಅಂಗಡಿಗೆ ಮಾ.8ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹಡವಿನಕೋಣೆಯ ಸಂದೀಪ ಮೇಸ್ತ ಎಂಬವರ ಆರ್ಯ ಮೊಬೈಲ್ ಅಂಗಡಿಯ ಶಟರ್ಗೆ ಹಾಕಿದ ಎರಡೂ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ವಿವಿಧ ಕಂಪೆನಿಯ ಏಳು ಮೊಬೈಲ್ ಹಾಗೂ ಕ್ಯಾಶ್ ಡ್ರಾವರ್ನಲ್ಲಿದ್ದ 500 ರೂ. ನಗದು ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 24,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story