ಮಂಗಳೂರು ಏರ್ಪೋರ್ಟ್ನಲ್ಲಿ 49 ಲಕ್ಷ ರೂ. ಮೌಲ್ಯದ ಚಿನ್ನ ವಶ
ಮಂಗಳೂರು, ಮಾ. 9: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಕಸ್ಟಮ್ಸ್ ಅಧಿಕಾರಿಗಳು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 49.18 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ವಿದೇಶಿ ಮೂಲದ 24 ಕ್ಯಾರಟ್ ಶುದ್ಧತೆಯ 1,532.11 ಗ್ರಾಂ ಚಿನ್ನವನ್ನು ಮೂವರು ಪ್ರಯಾಣಿಕರಿಂದ ವಶಪಡಿಸಿದ್ದಾರೆ. ಚಿನ್ನವನ್ನು ಪ್ರಯಾಣಿಕರು ಗುದದ್ವಾರದಲ್ಲಿ ಅಡಗಿಸಿಟ್ಟಿದ್ದು ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಓರ್ವನಿಂದ 17.19 ಲಕ್ಷ ರೂ. ಮೌಲ್ಯದ 535.61 ಗ್ರಾಂ ಚಿನ್ನ ಹಾಗೂ ಇನ್ನೊಬ್ಬನ ಬಳಿ 16.21 ಲಕ್ಷ ರೂ. ಮೌಲ್ಯದ 505.04 ಗ್ರಾಂ, ಹಾಗೂ ಮೂರನೇ ವ್ಯಕ್ತಿಯ ಬಳಿ 15.77 ಲಕ್ಷ ರೂ. ಮೌಲ್ಯದ 491 ಗ್ರಾಂ ಚಿನ್ನ ಪತ್ತೆಯಾಗಿದೆ.
ಕೆಲವೇ ದಿನಗಳ ಹಿಂದೆ ಕಸ್ಟಮ್ಸ್ ಅಧಿಕಾರಿಗಳು ಇದೇ ರೀತಿಯಾಗಿ 10.30 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದರು.
Next Story