ಪಲಿಮಾರು ಸರಕಾರಿ ಪ್ರೌಢಶಾಲಾ ಶೌಚಾಲಯ ಉದ್ಘಾಟನೆ
ಪಡುಬಿದ್ರೆ, ಮಾ.10: ಅದಾನಿ ಯುಪಿಸಿಎಲ್ನ ಸಿಎಸ್ಆರ್ ಯೋಜನೆ ಯಡಿ ಅದಾನಿ ಫೌಂಡೇಶನ್ ವತಿಯಿಂದ ಪಲಿಮಾರು ಸರಕಾರಿ ಪ್ರೌಢ ಶಾಲೆ ಯಲ್ಲಿ 4.50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಾಲಯ ವನ್ನು ಕಂಪನಿಯ ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ ಪುಟ್ರಾಡೋ ಇತ್ತೀಚೆಗೆ ಉದ್ಘಾಟಿಸಿದರು.
ಎಪಿಎಂಸಿ ಸದಸ್ಯ ನವೀನ ಚಂದ್ರ ಸುವರ್ಣ, ಪಲಿಮಾರು ಗ್ರಾಪಂ ಉಪಾಧ್ಯಕ್ಷೆ ಸುಮಂಗಲ ದೇವಾಡಿಗ, ಸದಸ್ಯರಾದ ಗಾಯತ್ರಿ ಪ್ರಭು, ಸತೀಶ್, ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಗ್ರೇಟಾ ಮೋರೀಸ್, ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾ ಮುಖ್ಯ ಶಿಕ್ಷಕಿ ಆಶಾ, ಎಸ್ಡಿಎಂಸಿ ಸದಸ್ಯರಾದ ಸುರೇಶ ಆಚಾರ್ಯ, ಸ್ವಚ್ಛಾಗ್ರಹ ಪ್ರೇರಕ ಕಲ್ಲಪ್ಪ, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ಫೌಂಡೇಶನ್ನ ಸ್ವಚ್ಚಾಗ್ರಹ ಯೋಜನಾಧಿಕಾರಿ ವಿನೀತ್ ಅಂಚನ್, ಸುಕೇಶ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.
Next Story