ದ್ವಿತೀಯ ಪಿಯುಸಿ ಪರೀಕ್ಷೆ : ಉಡುಪಿ ಜಿಲ್ಲೆಯಲ್ಲಿ 227 ಮಂದಿ ಗೈರು
ಉಡುಪಿ, ಮಾ.11: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ಒಟ್ಟು ನಾಲ್ಕು ಪರೀಕ್ಷೆಗಳಲ್ಲಿ 227 ಮಂದಿ ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಸಾಯನ ಶಾಸ್ತ್ರ ಪರೀಕ್ಷೆಗೆ 5133 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 5104 ಮಂದಿ ಪರೀಕ್ಷೆ ಬರೆದು 29 ಮಂದಿ ಗೈರುಹಾಜರಾಗಿದ್ದಾರೆ. ಸೋಶಿಯಾಲಜಿ ಪರೀಕ್ಷೆಗೆ 1615 ಮಂದಿ ನೊಂದಾಯಿತರಾಗಿದ್ದು ಇವರಲ್ಲಿ 1564 ಮಂದಿ ಇಂದು ಪರೀಕ್ಷೆಗೆ ಹಾಜರಾಗಿ 51 ಮಂದಿ ಗೈರಾಗಿದ್ದಾರೆ.
ಅದೇ ರೀತಿ ಬ್ಯುಸಿನೆಸ್ ಸ್ಟಡೀಸ್ನ ಹೊಸ ಪಠ್ಯಕ್ರಮಕ್ಕೆ 8248 ಮಂದಿ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿ ಇವರಲ್ಲಿ 8184 ಮಂದಿ ಪರೀಕ್ಷೆ ಬರೆದು 64 ಮಂದಿ ಗೈರುಹಾಜರಾಗಿದ್ದಾರೆ. ಅದೇ ಹಳೆಯ ಪಠ್ಯ ಕ್ರಮದ ಪರೀಕ್ಷೆಗೆ 113 ಮಂದಿ ಕುಳಿದ್ದು, ಇವರಲ್ಲಿ 29 ಮಂದಿ ಪರೀಕ್ಷೆ ಬರೆದು 83 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story