ಪಲ್ಸ್ ಪೋಲಿಯೊ: ಉಡುಪಿ ಜಿಲ್ಲೆಯಲ್ಲಿ ಶೇ.97.27 ಸಾಧನೆ
ಉಡುಪಿ, ಮಾ.11: ರವಿವಾರ ಉಡುಪಿ ಜಿಲ್ಲೆಯಾದ್ಯಂತ ನಡೆದ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶೇ.97.27ರ ಸಾಧನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯ 0-5 ವರ್ಷದೊಳಗಿನ ಒಟ್ಟು 77,740 ಮಕ್ಕಳಲ್ಲಿ ರವಿವಾರ 75,615 ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲಾಗಿದೆ. ಉಡುಪಿ ತಾಲೂಕಿನ 36,361 ಮಕ್ಕಳಲ್ಲಿ 35,362 (ಶೇ.97.25) ಮಕ್ಕಳಿಗೆ, ಕುಂದಾಪುರ ತಾಲೂಕಿನ 27,472 ಮಕ್ಕಳಲ್ಲಿ 27,022 (ಶೇ.98.36) ಮಂದಿಗೆ ಹಾಗೂ ಕಾರ್ಕಳ ತಾಲೂಕಿನ 13,907 ಮಕ್ಕಳಲ್ಲಿ 13,231 ಮಕ್ಕಳಿಗೆ (ಶೇ.95.14) ಲಸಿಕೆಯನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story