ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ ವಿವರ
ಉಡುಪಿ, ಮಾ.11: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 14,94,443 ಅರ್ಹ ಮತದಾರರಿದ್ದಾರೆ. ಇವರಲ್ಲಿ 7,30,388 ಪುರುಷ ಮತದಾರರಾದರೆ, 7,64,105 ಮಹಿಳೆಯರು ಹಾಗೂ 50 ಇತರೆ ಮತದಾರರೂ ಇಲ್ಲಿದ್ದಾರೆ. ಕಳೆದ ಬಾರಿಯ (2014) ಚುನಾವಣೆ ಯಲ್ಲಿ ಈ ಕ್ಷೇತ್ರದಲ್ಲಿ 6,61,364 ಪುರುಷ, 6,89,833 ಮಹಿಳೆಯರು ಹಾಗೂ 48 ಇತರೆ ಮತದಾರರು ಸೇರಿ ಒಟ್ಟು 13,51,245 ಮಂದಿ ಮತದಾರರಿದ್ದರು.
ಈ ಮೂಲಕ ಈ ಬಾರಿ 1,43,198 (ಶೇ.10.60) ಮತದಾರರ ಹೆಚ್ಚಳವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪತಿ ತಿಳಿಸಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕುಂದಾಪುರ ಕ್ಷೇತ್ರದಲ್ಲಿ 15,380 (ಶೇ.8.33), ಉಡುಪಿಯಲ್ಲಿ 19,674 (ಶೇ.10.58), ಕಾಪುವಿನಲ್ಲಿ 20,340 (ಶೇ.12.65), ಕಾರ್ಕಳದಲ್ಲಿ 16,868 (ಶೇ.10.25), ಶೃಂಗೇರಿಯಲ್ಲಿ 14,201 (ಶೇ.9.45), ಮೂಡಿಗೆರೆ 15,173 (ಶೇ.9.98), ಚಿಕ್ಕಮಗಳೂರು 21,623 (ಶೇ.11.30) ಹಾಗೂ ತರೀಕೆರೆ 19,939 (ಶೇ.12.33) ಮತದಾರರ ಹೆಚ್ಚಳವಾಗಿದೆ.
ವಿಧಾನಸಭಾ ಕ್ಷೇತ್ರ ಪುರುಷರು ಮಹಿಳೆಯರು ಇತರೆ ಒಟ್ಟು ಮತಗಟ್ಟೆಗಳು
ಉಡುಪಿ ಜಿಲ್ಲೆ
ಕುಂದಾಪುರ 96164 - 103937 -0 - 200101 - 222
ಉಡುಪಿ 99598 - 105966 -2 -205566 - 226
ಕಾಪು 86308 - 94858- 12 -181178 -208
ಕಾರ್ಕಳ 86921- 94464 -1 -181386 -209
ಚಿಕ್ಕಮಗಳೂರು ಜಿಲ್ಲೆ
ಶೃಂಗೇರಿ 81206 -83190- 4 -164400- 256
ಮೂಡಿಗೆರೆ 82405 -84736 -9 -167150 -231
ಚಿಕ್ಕಮಗಳೂರು 106238 -106732 -22 -212992 -257
ತರಿಕೆರೆ 91449 -90222 -0 -181670- 228
ಒಟ್ಟು ಮತದಾರರು 730288 -764105 -50 -1494443- 1837