ಮೀನು ವ್ಯಾಪಾರಿ ನಾಪತ್ತೆ
ಮಲ್ಪೆ, ಮಾ.11: ಕಡೆಕಾರು ಗ್ರಾಮದ ಕೊಳ ನಿವಾಸಿ ಹರೀಶ್ ಪೂಜಾರಿ ಎಂಬವರ ಮಗ ಮೀನು ವ್ಯಾಪಾರಿ ರಿಕೇಶ್ ಪಾಲನ್(30) ಎಂಬವರು ಮಾ.8ರಿಂದ ನಾಪತ್ತೆಯಾಗಿದ್ದಾರೆ.
ಇವರು ಮೀನು ವ್ಯಾಪಾರದ ಬಾಕಿ ಹಣವನ್ನು ತಾನು ವ್ಯವಹಾರ ಮಾಡು ತ್ತಿದ್ದ ಮೀನಿನ ಫ್ಯಾಕ್ಟರಿಯಾದ ಕುಮುಟಾದ ತದಡಿಗೆ ತೆರಳಿ ತರುವುದಾಗಿ ಪತ್ನಿ ಬಳಿ ಹೇಳಿ ಹೋಗಿದ್ದು, ಬಳಿಕ ಅದೇ ದಿನ ಮಧ್ಯಾಹ್ನ ಅವರ ಪತ್ನಿಗೆ ದೂರ ವಾಣಿ ಕರೆ ಮಾಡಿದ್ದರು. ನಂತರ ರಿಕೇಶ್ರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಕುಮುಟಾದ ತದಡಿ ಫ್ಯಾಕ್ಟರಿಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story