ಲೋಕಸಭಾ ಚುನಾವಣೆ ಹಿನ್ನಲೆ: ಅಬಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಕಂಟ್ರೋಲ್ ರೂಮ್ ಸ್ಥಾಪನೆ
ಮಂಗಳೂರು, ಮಾ.11: 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಕ್ರಮ ಮದ್ಯ/ಬೀರ್ ತಯಾರಿಕೆ/ದಾಸ್ತಾನು/ಸಾಗಾಣಿಕೆ ಬಗ್ಗೆ ನೀಡಲಾಗುವ ದೂರುಗಳನ್ನು ಸ್ವೀಕರಿಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಸಹಕಾರಿ ಆಗುವಂತೆ ನೋಡಿಕೊಳ್ಳಲು ಅಬಕಾರಿ ಇಲಾಖಾ ವತಿಯಿಂದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ತಾಲೂಕು ಮಟ್ಟದ ಕಂಟ್ರೋಲ್ ರೂಮ್ಗಳನ್ನು ತೆರೆಯಲಾಗಿದ್ದು, ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ಅಬಕಾರಿ ಉಪಾಯುಕ್ತರ ಕಚೇರಿ, ಅಬಕಾರಿ ಭವನ, ಮೇರಿಹಿಲ್, ಮಂಗಳೂರು ಟೋಲ್ ಫ್ರೀ ಸಂ; 18004253872, ಅಬಕಾರಿ ನಿರೀಕ್ಷಕರ ಕಚೇರಿ, ಬಂಟ್ವಾಳ ವಲಯ, ಬಂಟ್ವಾಳ, ಟೋಲ್ ಫ್ರೀ ಸಂ; 08255-232726, ಅಬಕಾರಿ ನಿರೀಕ್ಷಕರ ಕಚೇರಿ, ಬೆಳ್ತಂಗಡಿ ವಲಯ, ಬೆಳ್ತಂಗಡಿ, ಟೋಲ್ ಫ್ರೀ ಸಂ; 08256-298757, ಅಬಕಾರಿ ನಿರೀಕ್ಷಕರ ಕಚೇರಿ, ಪುತ್ತೂರು ವಲಯ, ಪುತ್ತೂರು, ಟೋಲ್ ಫ್ರೀಸಂ; 08251-298481, ಅಬಕಾರಿ ನಿರೀಕ್ಷಕರ ಕಚೇರಿ, ಸುಳ್ಯ ವಲಯ, ಸುಳ್ಯ, ಟೋಲ್ ಫ್ರೀ ಸಂ; 08257-231309.
ಸಾರ್ವಜನಿಕರು ಅಬಕಾರಿ ಅಕ್ರಮಗಳ ಮಾಹಿತಿಯನ್ನು ಈ ಕಂಟ್ರೋಲ್ ರೂಮ್ಗಳಿಗೆ ನೀಡಬಹುದಾಗಿದೆ ಎಂದು ದ.ಕ.ಜಿಲ್ಲಾ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ರ ಪ್ರಕಟನೆ ತಿಳಿಸಿದೆ.