ಹಳಿಯಾಳ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8.5 ಲಕ್ಷ ರೂ. ವಶ
ಹಳಿಯಾಳ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8.5 ಲಕ್ಷ ರೂ. ವನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮಾವಿನಕೊಪ್ಪ ಚೆಕ್ಪೊಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ಪ್ರಕರಣದಲ್ಲಿ 8.5 ಲಕ್ಷ ರೂ. ಪೊಲೀಸರು ವಶಪಡಿಸಿಕೊಂಡಿದ್ದು, ಹುಬ್ಬಳ್ಳಿಯ ಕೇಶವಪುರ ನಿವಾಸಿ ಮಲ್ಲಿಕಾರ್ಜುನ ಎಂಬಾತನಿಂದ 1.5 ಲಕ್ಷ ರೂ. ಹಾಗು ಧಾರವಾಡ ನಿವಾಸಿ ಸುನಿತ್ ಎಂಬಾತನಿಂದ 7 ಲಕ್ಷ ರೂ. ವಶಕ್ಕೆ ಪಡೆದುಕೊಂದ್ದಾರೆ ಎಂದು ತಿಳಿದುಬಂದಿದೆ.
ಅವರಿಬ್ಬರೂ ಗುತ್ತಿಗೆದಾರರು ಎನ್ನಲಾಗಿದ್ದು, ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ವಶ ಪಡಿಸಿಕೊಂಡಿರುವುದಾಗಿ ತಿಳಿಸಿದೆ.
Next Story