ಕಾರ್ಕಳ: ಮಾಳ ಚೆಕ್ ಪೊಸ್ಟ್ ನಲ್ಲಿ ದಾಖಲೆ ಇಲ್ಲದ ನಗದು ವಶ
ಕಾರ್ಕಳ, ಮಾ.12: ದಾಖಲೆಗಳಿಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ನಗದನ್ನು ಕಾರ್ಕಳ ಪೊಲೀಸರು ಮಂಗಳವಾರ ರಾತ್ರಿ ಮಾಳ ಚೆಕ್ ಪೊಸ್ಟ್ ನಲ್ಲಿ ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಮಾಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಜೀಪಿನಲ್ಲಿ ದಾಖಲೆ ಇಲ್ಲದ 1,50,000 ರೂ. ನಗದು ಪತ್ತೆಯಾಗಿದೆ.
ಇದು ಕಾರಿನಲ್ಲಿದ್ದ ಬಾಲಕೃಷ್ಣ ಮತ್ತು ಸೈಯದ್ ಮುಹಿನುಲ್ಲಾ ಎಂಬವರಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಹಣವನ್ನು ಪೊಲೀಸರು ಕಾರ್ಕಳ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ.