ದ್ವಿತೀಯ ಪಿಯುಸಿ ಪರೀಕ್ಷೆ: 13 ಮಂದಿ ಗೈರು
ಉಡುಪಿ, ಮಾ.13: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಲ್ಲಿ ಒಟ್ಟು 13 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ಅವರ ಪ್ರಕಟಣೆ ತಿಳಿಸಿದೆ.
ಕಂಪ್ಯೂಟರ್ ಸಾಯನ್ಸ್ ಪರೀಕ್ಷೆಗೆ 3241 ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದು ಇವರಲ್ಲಿ 3231 ಮಂದಿ ಪರೀಕ್ಷೆ ಬರೆದು 10 ಮಂದಿ ಗೈರಾದರೆ, ಇಲೆಕ್ಟ್ರಾನಿಕ್ಸ್ ವಿಷಯಕ್ಕೆ ಹೆಸರು ನೊಂದಾಯಿಸಿಕೊಂಡ 137 ಮಂದಿಯಲ್ಲಿ 135 ಮಂದಿ ಪರೀಕ್ಷೆ ಬರೆದು ಇಬ್ಬರು ಗೈರಾಗಿದ್ದಾರೆ. ಅದೇ ರೀತಿ ಇಬ್ಬರು ಹೆಸರು ನೊಂದಾಯಿಸಿಕೊಂಡ ಸೈಕಾಲಜಿ ವಿಷಯದಲ್ಲಿ ಒಬ್ಬ ಮಾತ್ರ ಪರೀಕ್ಷೆ ಬರೆದಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.
Next Story