ರಾಜ್ಯಮಟ್ಟದ ಕರಾಟೆ: ಎಂಇಟಿ ವಿದ್ಯಾರ್ಥಿಗಳ ಸಾಧನೆ
ಉಡುಪಿ, ಮಾ.13: ಕುಬುಡೋ ಬುಡೋಕಾನ್ ಕರಾಟೆ ಡೋ ಅಸೋ ಸಿಯೇಶನ್ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಉದ್ಯಾವರ ಕೊರಂಗ್ರಪಾಡಿ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆರು ಚಿನ್ನ, ಆರು ಬೆಳ್ಳಿ, ಎಂಟು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಮರಿಯಂ ರುಹಿನ್, ಜುರೈಜ್, ಅನುಶ್ರೀ, ಸಾಹಿಲ್ ಅಲಿ, ಮೆಹೆಜ್, ರಿಹಾನ್, ರಾಖಿಬ್, ರಿಹಾನ್, ಯೂಸುಫ್, ಇಲಾನ್, ಇಸ್ಮಾಯಿಲ್, ರಿಥ್ವಿ, ಹಾನಿ ಅಪ್ಸಾನ್, ಶೇಕ್ ಸಾಹದ್, ಎಂ.ಸಯೀದ್ ಆಫ್ರಿದ್, ಎಂ.ಅಪ್ನಾಸ್ ಅಲಿ ಸ್ಪರ್ಧೆಯಲ್ಲಿ ಪದಕ ವಿಜೇತರಾಗಿದ್ದಾರೆ.
ಶಾಲಾ ಸಂಚಾಲಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಪ್ರಾಂಶುಪಾಲ ಅಬೂಬಕ್ಕರ್ ಐ.ಯು., ಕರಾಟೆ ಮುಖ್ಯ ಶಿಕ್ಷಕ ರವಿ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
Next Story