ದ್ವಿತೀಯ ಪಿಯುಸಿ: ಉಡುಪಿಯಲ್ಲಿ 125 ಮಂದಿ ಗೈರು
ಉಡುಪಿ, ಮಾ.14: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಿಗೆ ಒಟ್ಟು 125 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತಿಹಾಸ ಪರೀಕ್ಷೆಗೆ 5463 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು 5350 ಮಂದಿ ಇಂದು ಹಾಜರಾಗಿ 113 ಮಂದಿ ಗೈರುಹಾಜರಾಗಿದ್ದಾರೆ. ಜೀವಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 3205 ಮಂದಿಯಲ್ಲಿ 3193 ಮಂದಿ ಪರೀಕ್ಷೆ ಬರೆದು 12 ಮಂದಿ ಗೈರಾಗಿದ್ದಾರೆ. ಬೇಸಿಕ್ ಮ್ಯಾಥ್ಸ್ನಲ್ಲಿ ಹೆಸರು ನೊಂದಾಯಿಸಿಕೊಂಡ ಎಲ್ಲಾ 118 ಮಂದಿ ಇಂದು ಹಾಜರಾಗಿದಾ್ದರೆ ಎಂದು ಪ್ರಕಟಣೆ ತಿಳಿಸಿದೆ.
Next Story