ಪಾತೂರು: ಮತ ಪ್ರಭಾಷಣ- ಇಸ್ಲಾಮಿಕ್ ಕಥಾ ಪ್ರಸಂಗ
ಮಂಗಳೂರು, ಮಾ.14: ಅಲ್ ಫಲಾಹ್ ಯೂತ್ ಫೆಡರೇಶನ್ ಪಾತೂರು ಇದರ 9ನೇ ವಾರ್ಷಿಕೋತ್ಸವದ ಅಂಗವಾಗಿ ಮಿತ್ತಬೈಲ್ ಉಸ್ತಾದ್ ನಗರ ಎನ್.ಎಂ.ಮುಸ್ತಾದ್ ವೇದಿಕೆಯಲ್ಲಿ ಒಂದು ದಿನದ ಮತ ಪ್ರಭಾಷಣ ಮತ್ತು ಎರಡು ದಿನಗಳ ಇಸ್ಲಾಮಿಕ್ ಕಥಾ ಪ್ರಸಂಗದ ಸಮಾರಂಭವನ್ನು ಗುರುವಾರ ಪಾತೂರು ಜುಮಾ ಮಸೀದಿಯ ಮುದರ್ರಿಸ್ ಅಬೂಬಕರ್ ಮದನಿ ಉದ್ಘಾಟಿಸಿದರು.
ಶೈಖುನಾ ಪಾತೂರು ಉಸ್ತಾದ್ ದುಆಗೈದರು. ಅನ್ವರ್ ಅಲಿ ಹುದವಿ ಕೊಂಡೋಟಿ ಮುಖ್ಯ ಪ್ರಭಾಷಣಗೈದರು. ವೇದಿಕೆಯಲ್ಲಿ ಅಬೂಬಕರ್ ಸಿದ್ದೀಕ್ ದಾರಿಮಿ, ಸಿರಾಜ್ ಹುದವಿ, ಹೈದರ್ಅಲಿ ಮುಸ್ಲಿಯಾರ್, ಮೂಸ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಪಾರ್ಟಿಯಿಂದ ಮಾ.15 ಮತ್ತು ಮಾ.16ರಂದು ರಾತ್ರಿ 8ಕ್ಕೆ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಲಿದೆ. ಮಾ.16ರಂದು ರಾತ್ರಿ 11 ಗಂಟೆಗೆ ಸೈಯದ್ ಫಕ್ರುದ್ದೀನ್ ತಂಙಳ್ ಕನ್ನಂತಾಳಿ ಮಲಪ್ಪುರಂ ನೇತೃತ್ವದಲ್ಲಿ ದುಆ ಮಜ್ಲಿಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story