ಮಾ.17: ಟಿ.ಸಿ.ವೆಲ್ಫೇರ್ ಫೌಂಡೇಶನ್ನಿಂದ ಸಾಮೂಹಿಕ ವಿವಾಹ
ಮಂಗಳೂರು, ಮಾ.15: ನಗರದ ಬಂದರ್ನ ಟಿ.ಸಿ. ವೆಲ್ಫೇರ್ ಫೌಂಡೇಶನ್ ವತಿಯಿಂದ ಆರು ಜೋಡಿ ಸಾಮೂಹಿಕ ವಿವಾಹವು ಮಾ.17ರಂದು ಬೆಳಗ್ಗೆ 10:30ಕ್ಕೆ ಬಂದರ್ ಬೀಬಿ ಅಲಾಬಿ ರಸ್ತೆಯ ಖಾದರ್ ಶಾ ವಲಿಯುಲ್ಲಾ ದರ್ಗಾದ ವಠಾರದಲ್ಲಿ ನಡೆಯಲಿದೆ.
ಖಾಝಿ ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆ ಮಾಡಲಿದ್ದು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಝೀನತ್ ಬಕ್ಷ್ ಜುಮಾ ಮಸ್ಜಿದ್ನ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story