ಬಿ.ಸಿ.ರೋಡ್ನ ಸರ್ವಿಸ್ ರಸ್ತೆಯಲ್ಲಿ ಬಸ್ಗಳ ಸಂಚಾರ ಪುನರಾರಂಭ
ಬಂಟ್ವಾಳ, ಮಾ. 15: ಬಿ.ಸಿ.ರೋಡ್ನ ಸರ್ವಿಸ್ ರಸ್ತೆಯಲ್ಲಿ ಈ ಹಿಂದಿನಂತೆ ಶುಕ್ರವಾರ ಖಾಸಗಿ, ಸರಕಾರಿ ಬಸ್ಗಳ ಸಂಚಾರ ಪುನರಾರಂಭಗೊಂಡಿದೆ.
ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರು ಸರ್ವಿಸ್ ರಸ್ತೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಗಳ ಸಂಚಾರಕ್ಕೆ ಏಕಾಏಕಿಯಾಗಿ ನಿರ್ಬಂಧಿ ಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ಸಂಬಂಧ ಸಾಮಾಜಿಕ ಜಾಲತಾಣ ಸಹಿತ ಸಾರ್ವಜನಿಕರು ಎಎಸ್ಪಿಯವರ ಏಕಾಏಕಿ ನಿರ್ಧಾರದ ಬಗ್ಗೆ ಟೀಕೆ, ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸಾರ್ವಜನಿಕರ, ಚಾಲಕರಿಂದಲೂ ವಿರೋಧ ವ್ಯಕ್ತವಾಗಿತ್ತು.
ಸಭೆಯ ಅಂತ್ಯಕ್ಕೆ ಪೊಲೀಸ್ ಅಧಿಕಾರಿಗಳು ಸ್ಪಷ್ಟ ನಿಲುವು ಪ್ರಕಟಿಸಿರಲಿಲ್ಲ, ಆದರೆ ಶುಕ್ರವಾರ ಈ ಹಿಂದಿನಂತೆ ಸರಕಾರಿ, ಖಾಸಗಿ ಬಸ್ ಸಂಚಾರ ಆರಂಭಿ ಸಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ದಿನಗಳಿಂದ ಸರ್ವಿಸ್ ರಸ್ತೆಯಲ್ಲಿ ಸರಕಾರಿ, ಖಾಸಗಿ ಬಸ್ ಗಳಿಗೆ ಸಂಚಾರ ನಿರ್ಬಂಧಿಸಿ ಗೊಂದಲಕ್ಕೊಳಗಾಗಿದ್ದ ಸಾರ್ವಜನಿಕರು ಶುಕ್ರವಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
Next Story