ಮಾ.17ರಂದು ‘ಸರ್ವಜನೋತ್ಸವ’ ಸಮಾವೇಶ
ಉಡುಪಿ, ಮಾ.15: ಸಹಬಾಳ್ವೆ ಉಡುಪಿ ವತಿಯಿಂದ ‘ಸರ್ವಜನೋತ್ಸವ’ ಸಮಾವೇಶವು ಮಾ.17ರಂದು ಮಧ್ಯಾಹ್ನ 3ಗಂಟೆಗೆ ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ನಲ್ಲಿ ನಡೆಯಲಿದೆ.
ಈ ಸಮಾವೇಶದಲ್ಲಿ ಸಾಮಾಜಿಕ ಚಿಂತಕರು, ಸಚಿವರು, ರಾಜಕೀಯ ನಾಯಕರು ಭಾಗವಹಿಸಲಿರುವರು. ಇದರಲ್ಲಿ ಸುಮಾರು 20-25 ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story