ಹೂಡೆ: ಮಹಿಳಾ ಆರೋಗ್ಯ ಮಾಹಿತಿ ಕಾರ್ಯಕ್ರಮ
ಉಡುಪಿ, ಮಾ.16: ಕಲ್ಯಾಣಪುರ ಮಿಲಾಗ್ರಿಸ್ ಸ್ನಾತಕೊತ್ತರ ಕಾಲೇಜು ವಿಭಾಗದ ಎಂಎಸ್ಡಬ್ಲು ವಿದ್ಯಾರ್ಥಿ ವೃಂದ, ಸಂತೆಕಟ್ಟೆ ಗೊರಟ್ಟಿ ಆಸ್ಪತ್ರೆ ಹಾಗೂ ಉಡುಪಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಡುತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಮಹಿಳಾ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತೆಕಟ್ಟೆ ಗೊರಟ್ಟಿ ಆಸ್ಪತ್ರೆಯ ವೈದ್ಯೆ ಡಾ.ರಾಜಲಕ್ಷ್ಮೀ ಮಾತನಾಡಿ, ಮಹಿಳೆಯ ಆರೋಗ್ಯ ಸದೃಢವಾಗಬೇಕಾದರೆ ದೈಹಿಕ ಪರಿಶ್ರಮ ಅಗತ್ಯ. ಪ್ರಸಕ್ತ ದಿನಗಳಲ್ಲಿ ಯಂತ್ರಗಳ ಸಹಾಯದಿಂದ ಅಡುಗೆ ತಯಾರಿ ಸುಲಭವಾಗುತ್ತ ಹೋದ ಹಾಗೆ ಈ ಹಿಂದೆ ಪಡೆಯುತ್ತಿದ್ದ ದೈಹಿಕ ಪರಿಶ್ರಮ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ವ್ಯಾಯಾಮಕ್ಕೆ ಪೂರಕವಾಗುವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಗೊರಟ್ಟೆ ಆಸ್ಪತ್ರೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಶಬೀನ ಅಧ್ಯಕ್ಷತೆ ವಹಿಸಿದ್ದರು. ಅರಪ್ಫಾ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಯಾಫ್ ವಂದಿಸಿದರು.