ಪಿಜಿ ಮೆನೇಜ್ಮೆಂಟ್ ಫೆಸ್ಟ್: ಸಂತ ಫಿಲೋಮಿನಾ ಕಾಲೇಜ್ ತಂಡಕ್ಕೆ ಪ್ರಥಮ ಬಹುಮಾನ
ಪುತ್ತೂರು: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ವ್ಯವಹಾರ ನಿರ್ವಹಣೆ ಅಧ್ಯಯನ ಕೇಂದ್ರವು ಮಾ.12 ಮತ್ತು 13 ರಂದು ಆಯೋಜಿಸಿದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಪಿಜಿ ಮ್ಯಾನೇಜ್ಮೆಂಟ್ ಫೆಸ್ಟ್ `ಶ್ರೇಷ್ಠ-2019' ಕಾರ್ಯಕ್ರದಲ್ಲಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಅನೂಪ್.ಕೆ ಮತ್ತು ಚಲನಾ ಯು.ಎಂ ಅವರ ತಂಡವು ಹ್ಯೂಮನ್ ರಿಸೋರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಬಹುಮಾನ ಗಳಿಸಿದ್ದಾರೆ ಎಂದು ಕಾಲೇಜ್ನ ಪ್ರಕಟಣೆ ತಿಳಿಸಿದೆ.
Next Story