ಮಂಗಳೂರು: ದಾಖಲೆ ರಹಿತ ಬಿಜೆಪಿಯ ಕರಪತ್ರ ಸಮೇತ ಇಬ್ಬರು ವಶಕ್ಕೆ
ಮಂಗಳೂರು, ಮಾ.16: ದಾಖಲೆ ರಹಿತವಾಗಿ ಬಿಜೆಪಿಯ ಕರಪತ್ರ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಮಾಡಿದ ಪೊಲೀಸರು 220 ಕರಪತ್ರ ಸಮೇತ ಇಬ್ಬರ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜೇಶ್ವರದ ಅಶ್ವಿನ್ ಹಾಗೂ ಅರುಣ್ ಅವರು ಕೇರಳ ನೋಂದಣಿಯ ಆಲ್ಟೋ ಕಾರಿನಲ್ಲಿ ಬಿಜೆಪಿಯ ಕರಪತ್ರಗಳನ್ನು ಸಾಗಾಟ ಮಾಡುತ್ತಿದ್ದರು. ಶುಕ್ರವಾರ ತಡರಾತ್ರಿ ನಂತೂರು ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಕರ ಪತ್ರದಲ್ಲಿ ನಿಯಮ ಪ್ರಕಾರ ಎಷ್ಟು ಪ್ರತಿಗಳು, ಯಾರು ಮುದ್ರಣ ಮಾಡಿದ್ದಾರೆ ಎಂಬ ವಿವರವನ್ನು ನಮೂದಿಸಿಲ್ಲ. ಕಾರು ಸಮೇತ ಎಲ್ಲ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story