ಬೀಡಿನಗುಡ್ಡೆ ಕಾರ್ಮಿಕನ ಕೊಲೆ ಪ್ರಕರಣ: ಮತ್ತೋರ್ವ ಬಂಧನ
ಉಡುಪಿ, ಮಾ.16: ಉಡುಪಿ ನಗರಸಭೆಯ ಕಸವಿಲೇವಾರಿ ಕಾರ್ಮಿಕ ಸಂತೋಷ(32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಮೇಶ್ ಎಂದು ಗುರುತಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮಾ.12ರಂದು ಧಾವರಾಡ ಜಿಲ್ಲೆ ಕುಮಾರ್ ಸಂಗಪ್ಪ(42) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇನ್ನೋರ್ವ ಆರೋಪಿ ಹರೀಶ್ ಎಂಬಾತ ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಮಾ.9ರಂದು ಮಧ್ಯರಾತ್ರಿ ಬಳಿಕ ಬೀಡಿನಗುಡ್ಡೆಯ ಉಡುಪಿ ನಗರಸಭೆಯ ನಿರಾಶ್ರಿತರ ವಸತಿ ಕಟ್ಟಡದಲ್ಲಿ ಸಂತೋಷ ಎಂಬವರನ್ನು ಕೊಲೆ ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story