ಕುಕ್ಕಾಜೆ ಪದವು: ಪಿಎಫ್ಐ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ
ಬಂಟ್ವಾಳ, ಮಾ. 16: ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಪದವು ಎಂಬಲ್ಲಿ ಕಳೆದ 5 ದಿನಗಳಿಂದ ನೀರಿಲ್ಲದೆ ಕಷ್ಟ ಅನುಭವವಿತ್ತಿರುವ ನಿವಾಸಿಗಳಿಗೆ ಪಿಎಫ್ಐ ಕುಕ್ಕಾಜೆ ಘಟಕ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಯಿತು.
ಕುಕ್ಕಾಜೆ ಪದವಿನಲ್ಲಿ ಕಳೆದ 5 ದಿನಗಳಿಂದ ನೀರು ಪೂರೈಕೆ ಕಡಿತ ಕೊಂಡಿದೆ. ಇದನ್ನು ಮನಗಂಡ ಪಿಎಫ್ಐ ಕುಕ್ಕಾಜೆ ಘಟಕ ವತಿಯಿಂದ ಸುಮಾರು 50ಕ್ಕಿಂತಲೂ ಆಧಿಕ ಮನೆಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕಾಜೆ ಘಟಕ ಅಧ್ಯಕ್ಷ ಶಾಕಿರ್ ಕುಕ್ಕಾಜೆ, ಕಾರ್ಯಕರ್ತರಾದ ನೌಫಲ್ ಕುಕ್ಕಾಜೆ, ಸುಫೈದ್, ಫಯಾಝ್, ಮುಫ್ರಾದ್, ಕುಕ್ಕಾಜೆ ಪದವು ಸಾರ್ವಜನಿಕರು ಸಹಕರಿಸಿದರು.
Next Story