ಬೆಳುವಾಯಿ: ಯುವಕ ನಾಪತ್ತೆ
ಮೂಡುಬಿದಿರೆ: ಬೆಳುವಾಯಿ ಶಾಂತಿನಗರದ ಮುದ್ದು ನಾಯ್ಕ್ ಅವರ ಪುತ್ರ, ಸಂದೀಪ್ ನಾಯ್ಕ್ (28) ಶನಿವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಆತನ ತಾಯಿ ವಿಮಲಾ ನಾಯ್ಕ್ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂದೀಪ್ ನಾಯ್ಕ್ ಶನಿವಾರ ಬೆಳಗ್ಗೆ 9ಗಂಟೆಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ, ನಂತರ ಮನೆಗೆ ವಾಪಾಸು ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story