ಮಲಾರ್ ಹೆಲ್ಪ್ಲೈನ್ನ ಪ್ರಥಮ ವಾರ್ಷಿಕೋತ್ಸವ
ಮಂಗಳೂರು, ಮಾ.17: ಪಾವೂರು ಗ್ರಾಮದ ಮಲಾರ್ ಹೆಲ್ಪ್ಲೈನ್ನ ಪ್ರಥಮ ವಾರ್ಷಿಕೋತ್ಸವವು ಮಲಾರ್ ಟಿಪ್ಪು ನಗರದ ಮರ್ಹೂಂ ಪಿ. ಇಸ್ಮಾಯೀಲ್ ವೇದಿಕೆಯಲ್ಲಿ ಶನಿವಾರ ಮಗ್ರಿಬ್ ನಮಾಝ್ ಬಳಿಕ ಜರುಗಿತು.
ಮಲಾರ್ ಹೆಲ್ಪ್ಲೈನ್ನ ಅಧ್ಯಕ್ಷ ಕಬೀರ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಹಿರಿಯ ಸದಸ್ಯ ಕೆ.ಎಂ. ಹಸನಬ್ಬ ಧ್ವಜಾರೋಹಣಗೈದರು. ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ನ ರಾಜ್ಯ ಕೋಶಾಧಿಕಾರಿ ರಫೀಕ್ ದಾರಿಮಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತಿರುವನಂತಪುರದ ಕೊನ್ನಿಯೂರ್ ಶಫೀಖ್ ಅಲ್ ಖಾಸಿಮಿ ಮತ ಪ್ರವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಿಎಫ್ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾಟಿಪಳ್ಳ, ಎಎಂಜೆಎಂ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಮೇಯರ್ ಕೆ.ಅಶ್ರಫ್, ಎಂಜೆಎಂ ಉಪಾಧ್ಯಕ್ಷ ಮುಸ್ತಫಾ ಪಾವೂರು, ಪತ್ರಕರ್ತ ಹಂಝ ಮಲಾರ್, ಶಿಕ್ಷಕ ಮಜೀದ್ ಮಲಾರ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ನಾಸಿರ್ ಮಲಾರ್, ಹಾರಿಸ್ ಮಲಾರ್, ಝಾಹಿದ್ ಮಲಾರ್, ನೌಫಾಲ್ ಮರ್ಝೂಕಿ, ಆರ್. ಮಜೀದ್, ಗ್ರಾಪಂ ಸದಸ್ಯ ಮಾಜಿ ಸದಸ್ಯ ಮುಹಮ್ಮದ್ ಬದ್ರಿಯಾ ನಗರ, ಹಾಜಿ ಅಬ್ದುರ್ರಝಾಕ್ ಅಜ್ಮೀರ್, ಎಂ.ಕೆ. ಮುಹಮ್ಮದ್ ಹನೀಫ್, ಹಾಜೀ ಆಸಿಫ್ ಎಸ್.ಎಂ., ಮಸ್ತಫ ಸಿ.ಎಂ. ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮೀರ್ ಟಿಪ್ಪುನಗರ, ಎಂ.ಕೆ.ಸಮದ್, ನೌಶಾದ್ ಟಿ. ಅವರನ್ನು ಸನ್ಮಾನಿಸಲಾಯಿತು. ಮಲಾರ್ ಹೆಲ್ಪ್ಲೈನ್ನ ಪ್ರಧಾನ ಕಾರ್ಯದರ್ಶಿ ಸಮೀರ್ ಟಿಪ್ಪುನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ರಾನ್ ಎಂ.ಕೆ. ಸ್ವಾಗತಿಸಿದರು. ಅಸ್ಪಾಕ್ ಕೆ.ಎಂ ಮತ್ತು ಎಂ.ಪಿ. ಆಸಿಫ್ ಕಾರ್ಯಕ್ರಮ ನಿರೂಪಿಸಿದರು. ರಹೀಂ ಎಂ.ಕೆ. ವಂದಿಸಿದರು.