ಟ್ರೋಲ್ ವಾಸಣ್ಣ ಪ್ರಸಿದ್ಧಿಯ ಮಲ್ಪೆ ವಾಸುಗೆ ಪೊಲೀಸರಿಂದ ಎಚ್ಚರಿಕೆ
ಉಡುಪಿ, ಮಾ. 17: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವಾಸಣ್ಣಯೆಂದೇ ಹೆಸರು ಪಡೆದಿದ್ದ ಮಲ್ಪೆ ವಾಸು ಎಂಬವರಿಗೆ ಉಡುಪಿ ಸೆನ್ ಅಪರಾಧ ಪೊಲೀಸರು ರವಿವಾರ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಶಬ್ದಗಳಿಂದ ನಿಂದನೆ ಮಾಡದಂತೆ ಅವರಿಗೆ ಸೆನ್ ಅಪರಾಧ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೀತಾರಾಮ್ ಸೂಚನೆ ನೀಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಬಾರಿ ವೈರಲ್ ಆಗುತ್ತಿದ್ದ ವಾಸು ರಾಜಕೀಯ ಪ್ರೇರಿತ ಮಾತುಗಳು, ಒಂದು ಪಕ್ಷವನ್ನು ನಿಂದನೆ, ರಾಜಕೀಯ ನಾಯಕರನ್ನು ಕೀಳಾಗಿ ಅಪಹಾಸ್ಯ ಮಾಡಿರುವ ಸಾಕಷ್ಟು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಾಸು ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಡಲಾಗಿದೆ. ಅದೇ ರೀತಿ ಅವರ ವೀಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯ ಬಿಟ್ಟವರನ್ನು ಕೂಡಾ ಪೊಲೀಸರು ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ.
ವಾಸು ಅವರಲ್ಲಿ, ಫೇಸ್ಬುಕ್ ಖಾತೆಯಿಲ್ಲ. ಆದರೆ ಕೆಲ ಕಿಡಿಗೇಡಿಗಳು ಅವರಿಗೆ ಮದ್ಯ, ಹಣದ ಆಮಿಷವೊಡ್ಡಿ ಈ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿದು ಬಂದಿದೆ.