ಮಾ. 19: ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಲೀಡರ್ಸ್ ಪಾರ್ಲಿಮೆಂಟ್
ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮಾ.19ರಂದು ಜಿಲ್ಲಾ ಲೀಡರ್ಸ್ ಪಾರ್ಲಿಮೆಂಟ್ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಅಧ್ಯಕ್ಷತೆಯಲ್ಲಿ ಲಯನ್ಸ್ ಕ್ಲಬ್ ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.
ಬೆಳಿಗ್ಗೆ 9:30 ಕ್ಕೆ ಮರ್ಹೂಮ್ ಶೈಖುನಾ ಜಬ್ಬಾರ್ ಉಸ್ತಾದ್ ರವರ ಖಬರ್ ಝಿಯಾರತ್ ನಡೆಯಲಿದೆ. ನಂತರ ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಯ ದುಆ ನಡೆಸಲಿದ್ದು, ಸಭೆಯನ್ನು ಎಸ್ಕೆಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಅನೀಸ್ ಕೌಸರಿ ಉದ್ಘಾಟಿಸಲ್ಲಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತ್ತುಲ್ಲಾ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಲ್ಲಿದ್ದು, ಎಸ್ಕೆಎಸ್ಸೆಸ್ಸೆಫ್ 30 ನೇ ವಾರ್ಷಿಕದ ವಿವಿಧ ಕಾರ್ಯಕ್ರಮ ಗಳ ಕುರಿತು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪದಂಲ್ಲೂರ್ ಮುಖ್ಯ ಭಾಷಣ ಮಾಡಲ್ಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.
Next Story