ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ವಿಸ್ಡಂ ಸಮಿತಿಯ ಇ-ಬುಲೆಟಿನ್ ಬಿಡುಗಡೆ
ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ವಿಸ್ಡಂ ಸಮಿತಿ ವತಿಯಿಂದ ವಿವಿಧ ಕೋರ್ಸ್ ಪ್ರವೇಶ ಮಾಹಿತಿ, ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆ, ಸ್ಕಾಲರ್ ಶಿಪ್ ಮೊದಲಾದವುಗಳ ಮಾಹಿತಿಯನ್ನೊಳಗೊಂಡ ಇ- ಬುಲೆಟಿನ್ ಅನ್ನು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಬಿಡುಗಡೆ ಮಾಡಿದರು.
ಇ- ಬುಲೆಟಿನ್ ಮುಂದಕ್ಕೆ 15 ದಿನಗಳಿಗೊಮ್ಮೆ ಹೊರತರಲಾಗುವುದು ಎಂದು ಈ ಸಂದರ್ಭ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು, ಎಸ್.ವೈ.ಎಸ್ ನಾಯಕ ಅಬ್ದುಲ್ ರಹ್ಮಾನ್ ಹಾಜಿ ಫ್ರಿಂಟೆಕ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ರಾಜ್ಯ ನಾಯಕರಾದ ಮುಸ್ತಫಾ ಮಾಸ್ಟರ್ ಉಳ್ಳಾಲ, ಸಫ್ವಾನ್ ಚಿಕ್ಕಮಗಳೂರು, ಶರೀಫ್ ಮಡಿಕೇರಿ, ಇಕ್ಬಾಲ್ ಮಂಗಳಪೇಟೆ ಮೊದಲಾದವರು ಉಪಸ್ಥಿತರಿದ್ದರು.
Next Story