ಸ್ಟೂಲ್ನಿಂದ ಬಿದ್ದು ಮೃತ್ಯು
ಮಲ್ಪೆ, ಮಾ.18: ಸ್ಟೂಲ್ ಮೇಲೆ ನಿಂತು ಜೀಪು ತೊಳೆಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಮಾ.17ರಂದು ಸಂಜೆ ಕಿನ್ನಿಮುಲ್ಕಿಯ ಕನ್ನರಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕನ್ನರಪಾಡಿಯ ಗೋಪಾಲ ಶೆಟ್ಟಿಗಾರ್(75) ಎಂದು ಗುರುತಿಸಲಾಗಿದೆ. ಇವರು ಮನೆಯ ಎದುರು ನಿಲ್ಲಿಸಿದ್ದ ಜೀಪನ್ನು ಸ್ಟೂಲ್ ಮೇಲೆ ನಿಂತು ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಗಾರ್ಡನ್ಗೆ ಅಳವಡಿಸಿದ ದಂಡೆಯ ಮೇಲೆ ಬಿದ್ದರು. ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಇವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story