ಮಾ. 21: ಪಿ.ಎ. ಕಾಲೇಜಿನಲ್ಲಿ 'ಪ್ಲೇಮ್-2019' ಕಾರ್ಯಕ್ರಮ
ಕೊಣಾಜೆ: ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ವಡೀಸ್ ಆ್ಯಂಡ್ ರಿಸರ್ಚ್ ಇದರ ಆಶ್ರಯದಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಕೂಟ 'ಪ್ಲೇಮ್-2019' ಕಾರ್ಯಕ್ರಮವು ಮಾ. 21ರಂದು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಆಕ್ಸೀಸ್ ಬ್ಯಾಂಕ್ನ ಸುರೇಶ್ ಅವರು ಉದ್ಘಾಟಿಸಲಿದ್ದು, ಪಿ.ಎ.ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್ ಅವರು ಅಧ್ಯಕ್ಷತೆ ವಹಿಸಿಲಿದ್ದಾರೆ.
ಪಿ.ಎ. ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಸರ್ಫ್ರಾಝ್ ಹಾಸಿಂ, ಉಪಪ್ರಾಂಶುಪಾಲ ಡಾ. ರಮೀಝ್ ಎಂ.ಕೆ., ಎಂಬಿಎ ವಿಭಾಗ ನಿರ್ದೇಶಕರಾದ ಡಾ. ಲತಾ ಕೃಷ್ಣನ್ ಮೊದಲಾದವರು ಉಪಸ್ಥಿತರಿರುವರು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story