ಐಸಿಐಸಿಐ ಬ್ಯಾಂಕ್ನಿಂದ ಮಂಗಳೂರಿನಲ್ಲಿ ಡಿಜಿಟಲ್ ತೆರಿಗೆ ಸಂಗ್ರಹ ಕೇಂದ್ರ
ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿನೂತನ ಯೋಜನೆ
ಮಂಗಳೂರು: ಐಸಿಐಸಿಐ ಬ್ಯಾಂಕ್, ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಇಂದು ಡಿಜಿಟಲ್ ತೆರಿಗೆ ಸಂಗ್ರಹ ಕೇಂದ್ರವನ್ನು ಉದ್ಘಾಟಿಸಿದೆ.
ಈ ವಿನೂತನ ವ್ಯವಸ್ಥೆ ಮೂಲಕ ನಗರದ ನಾಗರಿಕರು ಮಹಾನಗರ ಪಾಲಿಕೆ ತೆರಿಗೆಗಳನ್ನು ಪಾವತಿಸಬಹುದಾಗಿದೆ. ಹೊಸ ಡಿಜಿಟಲ್ ತೆರಿತೆ ಸಂಗ್ರಹ ಕೇಂದ್ರವನ್ನು ವೆಲೆನ್ಸಿಯಾದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ವಾರ್ಡ್ ಕಚೇರಿಯಲ್ಲಿರುವ ಬ್ಯಾಂಕಿನ ವಿಸ್ತರಣಾ ಕೌಂಟರ್ ನಲ್ಲಿ ಆರಂಭಿಸಲಾಗಿದೆ.
ಈ ನೂತನ ವ್ಯವಸ್ಥೆ ಮೂಲಕ ನಗರದ ತೆರಿಗೆ ಪಾವತಿದಾರರು 20ಕ್ಕೂ ಹೆಚ್ಚು ವಿಧದ ತೆರಿಗೆಗಳನ್ನು ಈ ಕೇಂದ್ರದಲ್ಲಿ ನಗದು ಹಾಗೂ ಡಿಮ್ಯಾಂಡ್ ಡ್ರಾಫ್ ಮೂಲಕ ಮಾತ್ರವಲ್ಲದೇ ಡಿಜಿಟಲ್ ವಿಧಾನದ ಮೂಲಕ ಅಂದರೆ ಡೆಬಿಡ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕವೂ ಪಾವತಿಸಬಹುದಾಗಿದೆ. ಈ ತೆರಿಗೆಗಳನ್ನು ಆಸ್ತಿ ತೆರಿಗೆ, ನೀರಿನ ಶುಲ್ಕ, ವಹಿವಾಟು ಲೈಸನ್ಸ್ ಶುಲ್ಕ ಮತ್ತಿತರ ತೆರಿಗೆಗಳನ್ನು ಪಾವತಿಸಬಹುದಾಗಿದೆ.
ಈ ವಿನೂತನ ಯೋಜನೆ ಮೂಲಕ, ಸಾಂಪ್ರದಾಯಿಕ ಪಾವತಿ ವಿಧಾನಗಳಾದ ನಗದು, ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್ ಜತೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಡಿಜಿಟಲ್ ವಿಧಾನದಲ್ಲಿ ಪಾವತಿಸುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಆರಂಭಿಸಿದ ಮೊಟ್ಟಮೊದಲ ಬ್ಯಾಂಕ್ ಎನಿಸಿಕೊಂಡಿದೆ. ತೆರಿಗೆ ಸಂಗ್ರಹ ಪರಿಹಾರ ವ್ಯವಸ್ಥೆಯನ್ನು ಬ್ಯಾಂಕ್ ವಿಶೇಷವಾಗಿ ಇಲ್ಲಿಗೆ ಸಿದ್ಧಪಡಿಸಿದ್ದು, ಇದರಡಿ ಕೈಯಲ್ಲಿ ಹಿಡಿದುಕೊಳ್ಳಬಹುದಾದ, ಎಂಸಿಸಿ ಸರ್ವರ್ ಒಳಗೊಂಡ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರದೊಂದಿಗೆ ಸಮನ್ವಯಗೊಳಿಸಲಾಗಿದೆ. ಇದು ಸ್ವಯಂಚಾಲಿತವಾಗಿ ನಿರ್ದಿಷ್ಟ ಖಾತೆಗೆ ತೆರಳಿ, ತಕ್ಷಣವೇ ಹಣ ಸ್ವೀಕರಿಸುವ ಜತೆಗೆ ಪಾವತಿ ದತ್ತಾಂಶವನ್ನು ಪರಿಷ್ಕರಿಸುತ್ತದೆ. ಇದು ತೆರಿಗೆ ಪಾವತಿದಾರರ ಅನುಕೂಲ ಹೆಚ್ಚಿಸಲು ನೆರವಾಗಲಿದ್ದು, ಇ-ಚಾನಲ್ಗಳನ್ನು ಸೃಷ್ಟಿಸಲು ಮತ್ತು ಎಂಸಿಸಿಗೆ ನೇರವಾತಿ ತೆರಿಗೆಗಳನ್ನು ಪಾವತಿಸಲು ವನ್ ಸ್ಟಾಪ್ ಪರಿಹಾರವಾಗಲಿದೆ.
ಈ ವಿನೂತನ ಉಪಕ್ರಮದ ಬಗ್ಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮೊಹ್ಮದ್ ನಝೀರ್ ಅವರು, "ಇಂಥ ವಿನೂತನ ಉಪಕ್ರಮವನ್ನು ಖಾಸಗಿ ವಲಯದ ಬ್ಯಾಂಕ್ ಕೈಗೆತ್ತಿಕೊಂಡಿರುವುದು ಅತೀವ ಸಂತಸ ತಂದಿದೆ. ಇದು ಗ್ರಾಹಕಸ್ನೇಹಿ ಕ್ರಮವಾಗಿ, ಎಲ್ಲ ಗ್ರಾಹಕರಿಗೆ ನೆರವಾಗುವ ಮೂಲಕ ಅವರ ಸಂತೃಪ್ತಿ ಹೆಚ್ಚಿಸಲು ಕಾರಣವಾಗಲಿದೆ ಎಂಬ ನಂಬಿಕೆ ನನ್ನದು. ಈ ಉಪಕ್ರಮವು ಎಲ್ಲ ಬಗೆಯ ಗ್ರಾಹಕರಿಗೆ ನೆರವಾಗಲಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಸಿಐಸಿಐ ಬ್ಯಾಂಕಿನ ದಕ್ಷಿಣ ವಲಯ ವಿಭಾಗದ ಚಿಲ್ಲರೆ ವಹಿವಾಟು ವಿಭಾಗದ ಮುಖ್ಯಸ್ಥ ವಿರಾಲ್ ರುಪಾನಿ ಮಾತನಾಡಿ, "ಮಂಗಳೂರು ನಾಗರಿಕರಿಗೆ ನಮ್ಮ ಡಿಜಿಟಲ್ ಬ್ಯಾಂಕಿಂಗ್ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಜತೆ ಸಹಯೋಗ ಹೊಂದಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಸೇವೆಯು ನಗರದ ಹತ್ತು ಲಕ್ಷ ತೆರಿಗೆ ಪಾವತಿದಾರರಿಗೆ ನೆರವಾಗಲಿದ್ದು, ಅವರು ಸುಲಭವಾಗಿ 20 ಬಗೆಯ ಪಾಲಿಕೆ ತೆರಿಗೆಗಳನ್ನು ತಮ್ಮ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ.
ಇದಲ್ಲದೇ, ಗ್ರಾಹಕರು ಬ್ಯಾಂಕಿನ ಹೊಸ ಡಿಜಿಟಲ್ ತೆರಿಗೆ ಸಂಗ್ರಹ ಕೇಂದ್ರದಲ್ಲಿ ಒಂದೇ ಹಂತದಲ್ಲಿ ತಮ್ಮ ಇ- ಚಲನ್ ಸೃಷ್ಟಿಸಿಕೊಳ್ಳಲು ಮತ್ತು ಪಾವತಿಯನ್ನು ಮಾಡಬಹುದಾಗಿದ್ದು, ತೆರಿಗೆ ಪಾವತಿದಾರರು ಸಾಕಷ್ಟು ಸಮಯವನ್ನು ಕೂಡಾ ಉಳಿಸಬಹುದಾಗಿದೆ. ಇದರ ಜತೆಗೆ ಅವರು ತಮ್ಮ ತೆರಿಗೆಗಳನ್ನು ನಗದು, ಚೆಕ್ ಅಥವಾ ಯಾವುದೇ ಬ್ಯಾಂಕ್ಗಳ, ನಗರದ ಯಾವುದೇ ಶಾಖೆಗಳ ಡಿಮ್ಯಾಂಡ್ ಡ್ರಾಫ್ಟ್ ಮೂಲಕವೂ ಪಾವತಿಸಬಹುದಾಗಿದೆ ಎಂದು ವಿವರಿಸಿದರು.
ನಮ್ಮ ಗ್ರಾಹಕರಿಗೆ ಸುಲಲಿತವಾದ ಬ್ಯಾಂಕಿಂಗ್ ಅನುಭವವನ್ನು ಒದಗಿಸುವ ಉತ್ಪನ್ನ ಹಾಗೂ ಸೇವೆಗಳನ್ನು ಪೂರೈಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ಈ ವಿನೂತನ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಐಸಿಐಸಿಐ ಬ್ಯಾಂಕಿನಲ್ಲಿ ನಮ್ಮ ಸಿದ್ಧಾಂತವೆಂದರೆ, "ನಿಮಗಾಗಿ ಸದಾ ಸಿದ್ಧ, ನಾಳೆಗಾಗಿ ಸದಾ ಸಜ್ಜು" ಎನ್ನುವುದು. ಇದಕ್ಕೆ ಅನುಸಾರವಾಗಿ ನಾವು ವಿನೂತನ ಉತ್ಪನ್ನ ಹಾಗೂ ಸೇವೆಗಳನ್ನು ಗಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟೂ ವೇಗವಾಗಿ ಹಾಗೂ ಗರಿಷ್ಠ ಅನುಕೂಲ ಕಲ್ಪಿಸುವ ಸಲುವಾಗಿ ವಿತರಿಸುತ್ತೇವೆ" ಎಂದು ಹೇಳಿದ್ದಾರೆ.