ಬಸ್ ಗಳು ಮುಖಾಮುಖಿ ಢಿಕ್ಕಿ; 60ಕ್ಕೂ ಅಧಿಕ ಸಾವು
ಘಾನಾ, ಮಾ.22: ಪಶ್ಚಿಮ ಆಫ್ರಿಕದ ಘಾನದಲ್ಲಿ ಶುಕ್ರವಾರ ಎರಡು ಬಸ್ ಗಳು ಮುಖಾಮುಖಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಬಸ್ ಗಳು ಢಿಕ್ಕಿಯಾದ ಬಳಿಕ ಒಂದು ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಇನ್ನೊಂದು ಬಸ್ಸು ನಜ್ಜು ಗುಜ್ಜಾಗಿದೆ. ಗಾಯಗೊಂಡಿರುವ 28 ಮಂದಿ ಪ್ರಯಾಣಿಕರನ್ನು ಕಿಂಟಾಪೊ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story