ಮಾ.23: ಪ್ರೊ.ಅಮೃತ್ ಸೋಮೇಶ್ವರ್ಗೆ ‘ಗೋವಿಂದ ಪೈ ಪ್ರಶಸ್ತಿ’ ಪ್ರದಾನ
ಮಂಗಳವಾರ, ಮಾ.22: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕವಿ, ಕಾದಂಬರಿಕಾರ, ಸಂಶೋಧಕ ಪ್ರೊ.ಅಮೃತ್ ಸೋಮೇಶ್ವರ್ ಅವರಿಗೆ ‘ರಾಷ್ಟ್ರಕವಿ ಗೋವಿಂದ ಪೈ’ ಪ್ರಶಸ್ತಿಯನ್ನು ಮಾ.23ರಂದು ಬೆಳಗ್ಗೆ 11 ಗಂಟೆಗೆ ಪ್ರೊ.ಅಮೃತ್ ಸೋಮೇಶ್ವರ್ ಅವರ ಸ್ವಗೃಹ ಕೋಟೇಪುರದಲ್ಲಿ ವಿತರಿಸಲಾಗುವುದು.
ಈ ಪ್ರಶಸ್ತಿಯನ್ನು ಸಾಹಿತ್ಯದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡುತ್ತಾ ಬರಲಾಗುತ್ತಿದ್ದು, ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ.
ಮಾಹೆ (ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್)ಯ ಕುಲಪತಿ ಪ್ರೊ.ಡಾ.ಎಚ್.ಎಸ್.ಬಳ್ಳಾಲ್, ಪ್ರೊ.ವಿವೇಕ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರೊ.ವರದೇಶ್ ಹಿರೆಗಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story