ಟಿಪ್ಪು ಸುಲ್ತಾನ್ ಕಾಲೇಜು ಪ್ರಾಂಶುಪಾಲ ಡಿ.ಬಿ. ಮೊಯಿದಿನ್ ನಿಧನ
ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿಪ್ಪು ಸುಲ್ತಾನ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಿಬಿ ಮೊಯಿದಿನ್ (54) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
2012ರಲ್ಲಿ ಪ್ರಾಂಶುಪಾಲರಾಗಿ ಹೊಣೆ ವಹಿಸಿಕೊಂಡಿದ್ದ ಅವರು, ಎಂಎ ಇಕಾನಾಮಿಕ್ಸ್ ಉಪನ್ಯಾಸಕರು.
ಮೃತರು ತಾಯಿ, ಉಪನ್ಯಾಸಕಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮತ್ತು ಟ್ರಸ್ಟ್ ನ ಸರ್ವ ಸದಸ್ಯರು ಹಾಗೂ ಉಪನ್ಯಾಸಕ ವೃಂದ ಸಂತಾಪವನ್ನು ವ್ಯಕ್ತಪಡಿಸಿದೆ.
Next Story