ಕೋಳಿ ಅಂಕಕ್ಕೆ ದಾಳಿ: ಆರು ಮಂದಿ ಸೆರೆ
ಶಿರ್ವ, ಮಾ.24: ಶಿರ್ವ ಜಾರಾಂದಾಯ ದೈವಸ್ಥಾನದ ಜಾತ್ರೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಕೋಳಿ ಅಂಕಕ್ಕೆ ಇಂದು ಸಂಜೆ ವೇಳೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗಣೇಶ್(33), ರಾಜೇಂದ್ರ(29), ಗಿರೀಶ್(52), ತುಕರಾಮ (48), ಮಂಜೇಶ್(28), ರೋಹಿತ್(36) ಎಂದು ಗುರುತಿಸಲಾಗಿದೆ. ಇವರಿಂದ 19 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರು ದಾಳಿ ವೇಳೆ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story