ಮೂಡುಬಿದಿರೆ, ಮಾ.25: ಪಡುಮಾರ್ನಾಡು ಗ್ರಾಮದ ಹರಿನಿವಾಸದ ದಿವಂಗತ ಬೊಮ್ಮಯ್ಯ ಹೆಗ್ಡೆ ಅವರ ಪತ್ನಿ ಪಡುಕೊಣಾಜೆ ಗ್ರಾಮದ ಹೌದಾಲಿನ ಹೊಸಮನೆ ನಿವಾಸಿ, ನಾಟಿವೈದ್ಯೆ ಅಪ್ಪಿ ಹೆಗ್ಡೆ(87) ಅಲ್ಪ ಕಾಲದ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.