ಎಸೆಸೆಲ್ಸಿ: ಉಡುಪಿಯಲ್ಲಿ 186 ವಿದ್ಯಾರ್ಥಿಗಳು ಗೈರು
ಉಡುಪಿ, ಮಾ.25: ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ನಡೆದ ಎಸೆಸೆಲ್ಸಿಯ ಗಣಿತ ಪರೀಕ್ಷೆಯಲ್ಲಿ 186 ಮಂದಿ ಪರೀಕ್ಷಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಒಟ್ಟು 13947 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 13761 ಮಂದಿ ಹಾಜರಾಗಿದ್ದಾರೆ. ನೊಂದಾಯಿತ 13,436 ಮಂದಿ ರೆಗ್ಯೂಲರ್ ಹಾಗೂ ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 13304 ಮಂದಿ ಪರೀಕ್ಷೆ ಬರೆದು 132 ಮಂದಿ ಗೈರುಹಾಜರಾದರೆ, ಖಾಸಗಿಯಾಗಿ ಕುಳಿತ 511 ಅಭ್ಯರ್ಥಿಗಳಲ್ಲಿ 457 ಮಂದಿ ಪರೀಕ್ಷೆ ಬರೆದು 54 ಮಂದಿ ಗೈರುಹಾಜರಾಗಿದ್ದಾರೆ.
ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರದಿಂದಲೂ ಅಕ್ರಮ ಅಥವಾ ಅವ್ಯವಹಾರ ನಡೆದ ವರದಿ ಬಂದಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.
Next Story