ಎ.2-3: ವಾರ್ಷಿಕ ಪೂಜಾ ಮಹೋತ್ಸವ
ಕಾರ್ಕಳ: ದುರ್ಗ ಗ್ರಾಮದ ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ಎ.2 ಮತ್ತು 3ರಂದು ನಡೆಯಲಿದೆ.
ಎ.2ರಂದು ಪುಣ್ಯಾಹವಾಚನ, ತೋರಣ ಮುಹೂರ್ತ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ಅಲಂಕಾರ ಪೂಜೆ, ಉತ್ಸವ ಬಲಿ, ಮಹಾಪೂಜೆ, ಎ.3ರಂದು ಬೆಳಗ್ಗೆ ಅವಭೃತ, ಕಟ್ಟೆಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭೈರವ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story