ತೆಂಕನಿಡಿಯೂರು ಕಾಲೇಜಿಗೆ ಎಂಕಾಂನಲ್ಲಿ ಮೂರು ರ್ಯಾಂಕ್
ಸುಮಾ, ಸ್ಮಿತಾ ಭಟ್, ಶ್ರೇಯಾ ಶೆಟ್ಟಿ
ಉಡುಪಿ, ಮಾ.25: ಮಂಗಳೂರು ವಿವಿ ಕಳೆದ ಮೇ ತಿಂಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ನಡೆಸಿದ ಪರೀಕ್ಷೆಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂಕಾಂ ವಿಭಾಗ ಮೂರು ರ್ಯಾಂಕ್ಗಳನ್ನು ಪಡೆದಿದೆ.
ಕಾಲೇಜಿನ ವಿದ್ಯಾರ್ಥಿಗಳಾದ ಸುಮಾ (ಪ್ರಥಮ ರ್ಯಾಂಕ್), ಸ್ಮಿತಾ ಭಟ್ (ನಾಲ್ಕನೇ ರ್ಯಾಂಕ್) ಹಾಗೂ ಶ್ರೇಯಾ ಶೆಟ್ಟಿ (ಎಂಟನೇ ರ್ಯಾಂಕ್) ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Next Story