ತಾಯಿ- ಇಬ್ಬರು ಮಕ್ಕಳು ನಾಪತ್ತೆ
ಉಡುಪಿ, ಮಾ.25: ಕಾರ್ಕಳ ತಾಲೂಕು ಕೆರ್ವಾಸೆ ಗ್ರಾಮದ ಹೆಬ್ಬಾರೊಟ್ಟು ದರ್ಖಾಸು ಮನೆಯ ಅಶ್ವಿನಿ (27) ತನ್ನ ಇಬ್ಬರು ಗಂಡು ಮಕ್ಕಳು ಅನೀಶ್ (ಐದೂವರೆ ವರ್ಷ) ಹಾಗೂ ಪ್ರಣೀಶ್ (ಎರಡೂವರೆ ವಷರ್ರ್) ಎಂಬುವವರೊಂದಿಗೆ ಮಾ.15ರಿಂದ ಕಾಣೆಯಾಗಿದ್ದಾರೆ.
ಅಶ್ವಿನಿ 5ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈಬಣ್ಣ, ಕನ್ನಡ ಮತ್ತು ತುಳು ಭಾಷೆ ಬಲ್ಲವರಾಗಿದ್ದಾರೆ.
ಇವರು ಸಿಕ್ಕಿದಲ್ಲಿ ಅಜೆಕಾರು ಪೊಲೀಸ್ ಠಾಣೆ (ದೂರವಾಣಿ:08253-271100),ಪೊಲೀಸ್ ಉಪ ನಿರೀಕ್ಷಕರು, ಅಜೆಕಾರು ಠಾಣೆ (9480805470, 9480805471), ಪೊಲೀಸ್ ವೃತ್ತ ನಿರೀಕ್ಷಕರು (08258-231083, 9480805435), ಜಿಲ್ಲಾ ಪೊಲೀಸ್ ಕಚೇರಿ, ಉಡುಪಿ (0820-2534777) ಸಂಪರ್ಕಿಸುವಂತೆ ಅಜೆಕಾರು ಪೊಲೀಸ್ ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
Next Story