ಉಡುಪಿ: ಉಚಿತ ಕಿವಿ, ಕಣ್ಣು ತಪಾಸಣಾ ಶಿಬಿರ
ಉಡುಪಿ, ಮಾ.25: ಉಡುಪಿ ಹ್ಯುಮ್ಯಾನಿಟೇರಿಯನ್ ರಿಲೀಸ್ ಸೊಸೈಟಿ ಮತ್ತು ಮಣಿಪಾಲ ಸ್ಕೂಲ್ ಆಫ್ ಅಲೈಟ್ ಹೆಲ್ತ್ ಸಯನ್ಸಸ್ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಕಿವಿ ಮತ್ತು ಕಣ್ಣು ತಪಾಸಣಾ ಶಿಬಿರವನ್ನು ರವಿವಾರ ಉಡುಪಿಯ ಜಾಮಿಯ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಮಣಿಪಾಲದ ಸ್ಕೂಲ್ ಆಫ್ ಅಲೈಡ್ ಸಯನ್ಸಸ್ನ ಅಸೋಸಿಯೇಟ್ ಡೀನ್ ಡಾ.ಕೆ.ಎಂ.ಸಬು, ಒಪ್ಪೋ ಮೆಟ್ರಿ ವಿಭಾಗದ ಮುಖ್ಯಸ್ಥ ಡಾ.ರಮೇಶ್, ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ, ಎಚ್ಆರ್ಎಸ್ನ ಕ್ಯಾಪ್ಟನ್ ಅಮೀರ್ ಸಿದ್ಧಿಕ್ ಉಪಸ್ಥಿತರಿದ್ದರು.
ಎಚ್ಆರ್ಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಮರಕಡ ಪಾಸ್ತಾವಿಕ ವಾಗಿ ಮಾತನಾಡಿದರು. ಅನ್ವರ್ ಅಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಸುಮಾರು 300 ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.
Next Story