ಮಂಗಳೂರು: ಹೊಟೇಲ್ ಕೊಠಡಿಯಲ್ಲಿ ಬೆಂಕಿ ಅವಘಡ
ಮಂಗಳೂರು, ಮಾ.25: ನಗರದ ಪ್ರತಿಷ್ಠಿತ ಹೊಟೇಲೊಂದರ ಕೊಠಡಿಗೆ ಸೋಮವಾರ ಸಂಜೆ ಬೆಂಕಿ ಬಿದ್ದ ಘಟನೆ ಸಂಭವಿಸಿದೆ.
ನಗರದ ಫಳ್ನೀರ್ ರೋಡ್ನಲ್ಲಿರುವ ಮೋತಿ ಮಹಲ್ ಹೊಟೇಲ್ನ ಲಾಡ್ಜ್ನ ಕೊಠಡಿಯಲ್ಲಿ ಸಂಜೆ ವೇಳೆಗೆ ಈ ಅಗ್ನಿ ದುರಂತ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬೆಂಕಿ ಹತ್ತಿಕೊಂಡ ಪರಿಣಾಮ ಕೊಠಡಿಯಲ್ಲಿದ್ದ ಎಸಿ (ಹವಾ ನಿಯಂತ್ರಣ ಯಂತ್ರ), ಟಿವಿ, ಹಾಸಿಗೆ ಹಾಗೂ ಸೊತ್ತುಗಳು ಸುಟ್ಟು ಕರಕಲಾಗಿವೆ. ಕೊಠಡಿಯ ಒಳಗಿನಿಂದ ಹೊಗೆ ಬರುತ್ತಿರುದ್ದುದರಿಂದ ಈ ವಿಷಯ ಸಿಬ್ಬಂದಿಯ ಗಮನಕ್ಕೆ ಬಂದಿದೆ.
ತಕ್ಷಣ ಪಾಂಡೇಶ್ವರ ಅಗ್ನಿ ಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಡುಬ್ಲಿಕೇಟ್ ಕೀ ಬಳಸಿ ಕೊಠಡಿ ಒಳಪ್ರವೇಶಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಕೊಠಡಿಯಲ್ಲಿ ಯಾರೂ ಇರದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
Next Story