ಮರೈನ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗೆ ರ್ಯಾಂಕ್
ಮಂಗಳೂರು, ಮಾ.26: ನಗರ ಹೊರವಲಯದ ಕುಪ್ಪೆಪದವಿನ ಮರೈನ್ ಕಾಲೇಜು ಆ್ಯಂಡ್ ಟೆಕ್ನಾಲಜಿಯ ವಿದ್ಯಾರ್ಥಿ ರುಶೀರ್ ಶಿರ್ವೈಕರ್ ರಾಜೇಶ್ ವಿಟಿಯು ಬಿಇ ಮರೈನ್ ಇಂಜಿನಿಯರಿಂಗ್ ಲಿತಾಂಶದಲ್ಲಿ ಮೊದಲ ರ್ಯಾಂಕ್ನೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ ಎಂದು ಮರೈನ್ ಕಾಲೇಜು ಆ್ಯಂಡ್ ಟೆಕ್ನಾಲಜಿಯ ಪ್ರಾಂಶುಲಾ ಡಾ. ಆ್ಯಂಟನಿ ಎ.ಜೆ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಮರೈನ್ ಕಾಲೇಜು ಆ್ಯಂಡ್ ಟೆಕ್ನಾಲಜಿಯ ಮುಂಬೈ ಡೈರೆಕ್ಟರೇಟ್ ಜನರಲ್ ಆ್ ಶಿಫ್ಪಿಂಗ್(ಭಾರತದ ಮ್ಯಾರಿಟೈಮ್ ಆ್ಯಡ್ಮಿನಿಸ್ಟ್ರೇಶನ್ ಪ್ರಾಧಿಕಾರ)ನಿಂದ ಅಂಗೀಕೃತಗೊಂಡ ಕರ್ನಾಟಕದ ಏಕೈಕ ಕಾಲೇಜು ಆಗಿದೆ. ಈಗಾಗಲೇ ಬಿಇ ಮರೈನ್ ಇಂಜಿನಿಯರಿಂಗ್, ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಿಗೆ ಮರೈನ್ ಇಂಜಿನಿಯರಿಂಗ್ನ ನಾನಾ ರೀತಿಯ ಕೋರ್ಸ್ಗನ್ನು ಸಂಸ್ಥೆ ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮರೈನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರತಾಪ್ ರೈ ಬೆಳಿಯೂರ್ ಉಪಸ್ಥಿತರಿದ್ದರು.