ಭಾರತದ ಸ್ಕೆಟಿಂಗ್ ಪಟುಗಳಿಗೆ 49 ಪದಕ
ಮಂಗಳೂರು, ಮಾ.26: ಅಬುದಾಬಿಯಲ್ಲಿ ಮಾ.14ರಿಂದ 21ರವರೆಗೆ ನಡೆದ ವಿಶ್ವ ವಿಶೇಷ ಒಲಿಂಪಿಕ್ಸ್ನ ಸ್ಪರ್ಧಾಕೂಟದಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ಮುಖ್ಯ ತರಬೇತುದಾರ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ಭಾರತದ ಸ್ಕೆಟಿಂಗ್ ಪಟುಗಳು 49 ಪದಕಗಳನ್ನು ಪಡೆದಿದ್ದಾರೆ.
ಈ ಬಗ್ಗೆ ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ಕುಮಾರ್, ಸ್ಕೇಟಿಂಗ್ನಲ್ಲಿ ಪಡೆದ 49 ಪದಕಗಳ ಪೈಕಿ 13 ಚಿನ್ನ, 20 ಬೆಳ್ಳಿ ಹಾಗೂ 16 ಕಂಚಿನ ಪದಕಗಳು ಸೇರಿವೆ. ಸ್ಕೇಟಿಂಗ್ ಸ್ಪರ್ಧಾಕೂಟದಲ್ಲಿ ಭಾರತದಿಂದ ಒಟ್ಟು 26 ಸ್ಪರ್ಧಿಗಳು (13 ಬಾಲಕರು ಹಾಗೂ 13 ಬಾಲಕಿಯರು) ಭಾಗವಹಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಉಪಸ್ಥಿತರಿದ್ದರು.
Next Story