ಮಂಗಳೂರು: ಎಚ್ಐಎಫ್ ವತಿಯಿಂದ 'ಅನಾಥರೊಂದಿಗೆ ಒಂದು ದಿನ' ಕಾರ್ಯಕ್ರಮ
ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ಸಿಂಮ್ರ ಫೌಂಡೇಶನ್ ಸಹಭಾಗಿತ್ವದೊಂದಿಗೆ 'ಅನಾಥರೊಂದಿಗೆ ಒಂದು ದಿನ' ಎಂಬ ವಿಶೇಷ ಕಾರ್ಯಕ್ರಮ ನಗರದ ಮಸ್ಜಿದುಲ್ ಎಹ್ಸಾನ್ ನಲ್ಲಿ ರವಿವಾರ ನಡೆಯಿತು.
ಜಿಲ್ಲೆಯ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎನ್.ಎ.ಮೊಹಮ್ಮದ್, ಡಾ. ಆರಿಸ್, ಡಾ. ಫಹೀಮ್, ಡಾ. ಶಾಮೀಮಾ ಹಫೀಝ್, ಡಾ. ಜಮೀಲ, ಡಾ. ಸಮೀರುದ್ದಿನ್, ಡಾ. ರಿಝ್ವಾನ್, ಡಾ. ಹಫೀಝ್ ಎಂ.ಎ., ಡಾ. ವಿಜಯಾ, ಡಾ. ಅಶ್ರಫ್ ಅಹ್ಮದ್, ಡಾ. ನಫೀಸಾ ಸಿರೀನ್ ಮತ್ತು ಎಚ್ಇಸಿಸಿಯ ಅಬ್ದುಲ್ ರಝಾಕ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷ ಸಾಜಿದ್ ಎ.ಕೆ. ಉಪಸ್ಥಿತರಿದ್ದರು.
ಜಿಲ್ಲೆಯ ಹಲವು ಕಡೆಗಳಿಂದ ಸುಮಾರು 300 ಅಧಿಕ ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿದ್ದರು. ವೈದ್ಯಕೀಯ ತಪಾಸಣೆಯೊಂದಿಗೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಬಾಶಿತ್ ಕಿರಾತ್ ಪಠಿಸಿದರು, ನಾಜಿಮ್ ಎಸ್.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.