ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬಂಟ್ವಾಳ, ಮಾ. 27: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹವು ಬಂಟ್ವಾಳ ಸಮೀಪ ನೇತ್ರಾವತಿ ನದಿಯಲ್ಲಿ ಬುಧವಾರ ಪತ್ತೆಯಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಜೈನರಪೇಟೆ ಸುಣ್ಣದಗೂಡು ನೇತ್ರಾವತಿ ಹಳೆಯ ಸೇತುವೆಯ ಪಕ್ಕದಲ್ಲಿ ಮೃತದೇಹವು ತೆಲುತ್ತಿರುವುದನ್ನು ಕಂಡ ಇಲ್ಲಿನ ಸ್ಥಳೀಯ ನಿವಾಸಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಎಸ್ಸೈ ಸುಧಾಕರ ತೋನ್ಸೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗೂಡಿನಬಳಿಯ ಈಜುಗಾರರು ಶವವನ್ನು ಮೇಲಕ್ಕೆತ್ತಿದ್ದಾರೆ.
ಮೃತದೇಹದ ಅಂಗಿಯಲ್ಲಿ ಪೊಳಲಿ ನಿವಾಸಿ ಎಂಬ ಚೀಟಿಯೊಂದು ದೊರೆತಿದ್ದು, ಪೊಲೀಸರು ವಿಳಾಸದ ತನಿಖೆ ನಡೆಸುತ್ತಿದ್ದಾರೆ.
Next Story